Kaagadada Doniyalli

Lyrics
[Instrumental Intro] [Chorus] ಕಾಗದದ ದೋಣಿಯಲ್ಲಿ ನಾ ಕೂರುವಂತ ಹೊತ್ತಾಯಿತೇ ಕಾಣಿಸದ ಹನಿಯೊಂದು ಕಣ್ಣಲ್ಲೇ ಕೂತು ಮುತ್ತಾಯಿತೇ ಹಗುರಾದಿತೇನೋ ನನ್ನೆದೆಯ ಭಾರ ಕಂಡಿತೇನೋ ತಂಪಾದ ತೀರಾ [Refrain] ಸಿಕ್ಕೀತೆ ಮುಂದಿನ ದಾರಿ ನನ್ನೆಲ್ಲಾ ಕಲ್ಪನೆ ಮೀರಿ ಇನ್ನೊಂದೇ ವಿಸ್ಮಯ ತೋರಿ [Instrumental] [Verse] ಹಾದಿಯಲ್ಲಿ ಹೆಕ್ಕಿದ ನೆನಪಿನ ಪುಟ್ಟ ಜೋಳಿಗೆ ಬೆನ್ನಲ್ಲಿದೆ ಆಡದಿರೋ ಸಾವಿರ ಪದಗಳ ಮೂಕ ಸೇತುವೆ ಕಣ್ಮುಂದಿದೆ ಈ ಹೆಜ್ಜೆಯ ಗುರುತೆಲ್ಲವ ಅಳಿಸುತ್ತಿರೋ ಮಳೆಗಾಲವೇ ನಾ ನಿನ್ನಯ ಮಡಿಲಲ್ಲಿರೋ ಬರಿಗಾಲಿನ ಮಗುವಾಗುವೆ ಮನಸಾದೀತೇನೋ ಇನ್ನೂ ಉದಾರ ಬಂದಿತೇನೋ ನನ್ನ ಬಿಡಾರ [Refrain] ಸಿಕ್ಕೀತೆ ಮುಂದಿನ ದಾರಿ ನನ್ನೆಲ್ಲಾ ಕಲ್ಪನೆ ಮೀರಿ ಇನ್ನೊಂದೇ ವಿಸ್ಮಯ ತೋರಿ [Instrumental Outro]
Rate this song
0/5.0 - 0 Ratings
5
0.0% (0)
4
0.0% (0)
3
0.0% (0)
2
0.0% (0)
1
0.0% (0)
Loading comments...
Credits
- Writers
- Jayanth Kaikini
- Rakshith Shetty
- Dhananjay Ranjan
- Kiran Kaverappa
- Veeresh Shivamurthy